"ನಿನ್ನ ಕಂಡರೆ ನನ್ನ ಮೈಯೆಲ್ಲಾ ಉರಿಯುತ್ತೆ. ನೀನು ಸರಿಯಿಲ್ಲ. ನನ್ನ ಬಗ್ಗೆ ನಿನಗೇನು ಗೊತ್ತು. ನಾನು ಹುಟ್ಟಿದಾಗಿನಿಂದ ಕಷ್ಟ ಅಸೂಯೆಗಳನ್ನು ಎದುರಿಸಿ ಮೆಟ್ಟಿ ನಿಂತವನು. ಅದರ ಬಗ್ಗೆ ನನಗಿಂತ ಹೆಚ್ಚು ಇನ್ಯಾರಿಗೂ ಗೊತ್ತಿರ್ಲಿಕ್ಕೆ ಸಾಧ್ಯನೇ ಇಲ್ಲ. ಇವನು ನನ್ನ ಪ್ರಾಣಗೆಳೆಯ. ಇವನಿಗೆ ಕೇಳು ನನ್ನ ಬಗ್ಗೆ ಹೇಳ್ತಾನೆ. ಇವರೆಲ್ಲ ನನ್ನ ಕಷ್ಟದ ದಿನಗಳಲ್ಲಿ ನನ್ನಜೊತೆ ಇದ್ದವರು. "
ಎಷ್ಟೋ ಬಾರಿ ನಾವು ಹೀಗೆ ಯಾರಿಗಾದರೂ ಹೇಳಿರಬಹುದು. ಅಥವಾ ಮನಸಲ್ಲೇ ಅಂದುಕೊಂಡಿರಬಹುದು. ಅಥವಾ ಬೇರೆ ಯಾರಾದರೂ ನಮಗೆ ಹೇಳಿರಬಹುದು. ಇದನ್ನು ಕೇಳಿದ ನಮಗೆ ಅಥವಾ ಇದನ್ನು ಕೇಳಿಸಿಕೊಂಡವನು ಪ್ರತಿಕ್ರಯಿಸಿಸದೆ ಇರಲಾರ. ಇದು ಮನುಷ್ಯನ ಸಹಜ ಗುಣ.
ಹೀಗೆ ಹಲವಾರು ಸನ್ನಿವೇಶಗಳು ನಮ್ಮ ನಿಮ್ಮ ಬದುಕಿನಲ್ಲಿ ಬಂದಿರಬಹುದು. ಆದರೆ ಇದರ ಕಾರಣಗಳೇನು. ಎಷ್ಟೋ ಜನ ಬರೀ ಮಾತಲ್ಲೇ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಒಬ್ಬ introvert (ಅಂತರ್ಮುಖಿ) extrovert (ಬಹಿರ್ಮುಖಿ) ಆಗಲು ಅವನು ಏನೆಲ್ಲಾ ಮಾಡಬೇಕು. ಅವನಿಗೆ ನಾವು ಏನೆಲ್ಲಾ ಸಹಾಯ ಮಾಡಬಹುದು. ಬೇರೆಯವರ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೇ? ನಮ್ಮನ್ನು ನಾವು ಎಷ್ಟು ಸರಿಯೆಂದು ಅಂದು ಕೊಂಡಿರುತ್ತೇವೆ? ನಮ್ಮ ವಿಚಾರಗಳಲ್ಲಿ ಎಷ್ಟು ತಪ್ಪಿರಬಹುದು. ಇದೆಲ್ಲದರ ಬಗ್ಗೆ ತಿಳಿದುಕೊಳ್ಳಲು ಡೇವಿಡ್ ಬ್ರೂಕ್ಸ್ ಅವರ ಈ ಪುಸ್ತಕ "How to know a person: An art of seeing others deeply and being deeply seen" ನಾವೆಲ್ಲರೂ ಓದಲೇ ಬೇಕು.
ಉದಾಹರಣೆಗಳೇ ತುಂಬಿರುವ ಈ ಪುಸ್ತಕವನ್ನು ಮೂರು ಹಂತಗಳಲ್ಲಿ ಡೇವಿಡ್ ರವರು ಬರೆದಿರುತ್ತಾರೆ. ಮೊದಲ ಹಂತವನ್ನು "I see you", ಎರಡನೆಯದನ್ನು "I see you in your struggles" ಹಾಗು ಮೂರನೆಯದನ್ನು "I see you with your strengths" ಎಂದು ಹೆಸರಿಸಿದ್ದಾರೆ. ಇಲ್ಲಿ ಒಬ್ಬ ಮನುಷ್ಯನ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಉದಾಹರಣೆಗಳೊಂದಿಗೆ ಸೂಕ್ಷ್ಮವಾಗಿ ಬರೆದಿದ್ದಾರೆ.
ನಮಗೆಲ್ಲ ಗೊತ್ತಿರುವ ಹಾಗೆ ಯಹೂದಿಯರೆಲ್ಲರೂ ಅತ್ಯಂತ ಹೆಸರು ಮಾಡಿರುವಂತ ವ್ಯಕ್ತಿಗಳು. ೨೦೦೭ ರಲ್ಲಿ ಯಹೂದಿಯವರಾದ ಯರೀವ್ ಎಂಬ ವ್ಯಕ್ತಿಯೊಂದಿಗೆ ಕೆಲಸದ ಮೇರೆಗೆ ಮೇಲ್ಬೋರ್ನಿಗೆ ಹೋದಾಗ ಇವರು ಯಹೂದಿಯವರ ಬಗ್ಗೆ ಹೇಳುತ್ತಿದ್ದರು. ಆಗ ಆಲ್ಬರ್ಟ್ ಐನ್ಸ್ಟೀನ್ ಜೊತೆಗೆ ಜರ್ನಲಿಸ್ಟ್ ಡೇವಿಡ್ ಬ್ರೂಕ್ಸ್ ಅವರ ಬಗ್ಗೆ ಒಂದೆರಡು ವಿಚಾರಗಳನ್ನು ನನಗೆ ಹೇಳಿದ್ದರು. ಇವರ ಬಗ್ಗೆ ಅಂದು ಬಿಟ್ಟರೆ ಬೇರೆ ಯಾವತ್ತು ನಾನು ಕೇಳಿದವನಲ್ಲ. ಆದರೆ ಈಗ ಡೇವಿಡ್ ಬ್ರೂಕ್ಸ್ ಒಬ್ಬ ಹೆಸರಾಂತ ಜರ್ನಲಿಸ್ಟ್. ನಾನು ಈಗ ಕೆಲಸ ಮಾಡುತ್ತಿರುವ ಕಂಪನಿಯ CEO ನಮಗೆ ಈ ಪುಸ್ತಕವನ್ನು ಕೊಟ್ಟಾಗ ಯರೀವ್ ನೆನಪಾದರು. ಡೇವಿಡ್ ಬ್ರೂಕ್ಸ್ ಏನೆಲ್ಲಾ ಈ ಪುಸ್ತಕದಲ್ಲಿ ಬರೆದಿರಬಹುದೆಂಬ ಕುತೂಹಲದೊಂದಿಗೆ ಓದಲು ಶುರು ಮಾಡಿದೆ. ತುಂಬಾ ವಿಚಾರಗಳು ನಮ್ಮ ಮನಸ್ಸಿನ ಒಳಗೆ ಉಳಿದಿರುತ್ತದೆ. ಇದೆಲ್ಲವನ್ನೂ ತಿಳಿದುಕೋಳ್ಳಲು ಈ ಪುಸ್ತಕ ಸಹಕಾರಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಅರಿವಾಯಿತು. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದೆನಿಸಿತು.
ಈ ಪುಸ್ತಕವನ್ನು ಬಿಡುವಾದ ಸಮಯದಲ್ಲಿ ಓದಲು ಹಿಂಜರಿಯಬೇಡಿ.
ಯಶಸ್ವಿ ಜೆ
ಬೆಂಗಳೂರು
Comments